
ತುಮಕೂರು: (ಇಂಡೋ ಟೈಮ್ಸ್ ಮೀಡಿಯಾ | ಆಮ್ಜದ)
ತುಮಕೂರು ಜಿಲ್ಲೆ ತಿಪಟೂರು ನಗರದ ಮದೀನಾ ಮಸೀದಿಯಲ್ಲಿ ಕಾಶ್ಮೀರದ ಪಹಲಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಂತಹ ಉಗ್ರರ ಅಟ್ಟವಾಸವನ್ನು ಖಂಡಿಸಿ ಮುಸ್ಲಿಂ ಮುಖಂಡರಾದ ದಸ್ತಗಿರ್ ಸಾಬ್ ಮತ್ತು ಸೈಫುಲ್ಲಾ ರವರ ನೇತೃತ್ವದಲ್ಲಿ ಇಂದು ಮುಸ್ಲಿಂ ಬಾಂಧವರೊಂದಿಗೆ ನಮಾಜ್ ಮುಗಿದ ನಂತರ ಮದೀನಾ ಮಸೀದಿಯಲ್ಲಿ ತೀವ್ರವಾಗಿ ಖಂಡಿಸಲಾಯಿತು ಮಾಧ್ಯಮದೊಂದಿಗೆ ಮುಸ್ಲಿಂ ಮುಖಂಡ ದಸ್ತಗಿರ್ ರವರು ಮಾತನಾಡಿ 23ನೇ ತಾರೀಖಿನಂದು ಕಾಶ್ಮೀರದ ಪಹಲ್ ಗಾಮ್ ನಲ್ಲಿ ನಡೆದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕರ್ನಾಟಕ ರಾಜ್ಯದವರು ಸೇರಿದ್ದು ಇದು ತೀವ್ರ ನೋವು ಉಂಟು ಮಾಡಿದೆ
ಈ ರೀತಿಯ ಕೃತ್ಯವನ್ನು ಎಸಗಿದ ಯಾರೇ ಆದರೂ ಖಂಡಿಸುತ್ತೇನೆ ನಾವು ಹಿಂದೂಸ್ಥಾನದಲ್ಲಿ ಹಿಂದೂ ಮುಸ್ಲಿಂ ಅಣ್ಣ ತಮ್ಮಂದಿರ ತರಹ ಜೀವನ ನಡೆಸುತ್ತಿದ್ದು ನಮ್ಮಿಬ್ಬರ ನಡುವೆ ಈ ಘಟನೆಯು ಬಿರುಕು ಮೂಡಿಸುವಂತೆ ಮಾಡುತ್ತಿದ್ದಾರೆ ಘಟನೆಯಲ್ಲಿ ಮೃತರಾದಂತಹ ಕುಟುಂಬಕ್ಕೆ ನಾವು ಈ ಮೂಲಕ ಸಾಂತ್ವನ ತಿಳಿಸುತ್ತಿದ್ದೇವೆ ಎಂದು ಹೇಳಿದರು.
ಈ ಘಟನೆಯಲ್ಲಿ ಹತ್ಯೆ ಅದ ಜನರ ಆತ್ಮಕ್ಕೆ ಶಾಂತಿಯನ್ನು ಕೂರುತ್ತೆವೆ. ಗಾಯಗೊಂಡ ಜನರು ಅತಿ ಶೀಘ್ರದಲ್ಲಿ ಗುಣಮುಖರಾಗಲು ಪ್ರಾರ್ಥಿಸಿದ್ದೇವೆ ಎಂದರು
ಈ ಘಟನೆಯಿಂದ ದೇಶದ ನಾಗರಿಕರು ಆಕ್ರೋಶಗೊಂಡಿದ್ದಾರೆ ಅದರಿಂದ ಈ ಕೃತ್ಯ ಎಸಗಿದ ಎಲ್ಲ ಆರೋಪಿಗಳಿಗೆ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇದರ ಹಿಂದೆ ಇರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಆಗಲಿ ಶತ್ರು ದೇಶದಲ್ಲಿ ಇದ್ರು ಹುಡಿಕಿ ತಂದು ಕಾನುನತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು