
ಇಂಡೋ ಟೈಮ್ಸ್ ಮೀಡಿಯಾ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ದಿನಾಂಕ 22/4/2025 ರ ಮಂಗಳವಾರ ಮಧ್ಯಾಹ್ನ 3 ಘಂಟೆಗೆ ಪ್ರವಾಸಕ್ಕೆ ಬಂದ ನಾಗರಿಕರ ಮೇಲೆ ದಾಳಿ ಮಾಡಿ ಭಯೋತ್ಪಾದಕರು ಗುಂಡಿಕ್ಕಿ ಸೂಮರು 26 ಜನರ ಹತ್ಯೆ ಮಾಡಿ ಹತ್ತಾರು ಜನರನ್ನು ಗಾಯ ಗೊಳಿಸಿದ್ದಾರೆ . ಈ ಭಯೋತ್ಪಾದಕ ಕೃತ್ಯವನ್ನು ದಾವಣಗೆರೆ ಮುಸ್ಲಿಂ ಒಕ್ಕೂಟ ತ್ರೀವ್ಯವಾಗಿ ಖಂಡಿಸುತ್ತದೆ, ಈ ಘಟನೆಯ ವಿರುದ್ಧ ಪ್ರತಿಭಟನೆಯ ಮಾಡಿ ದಾವಣಗೆರೆ ಉಪವಿಭಾಗಾಧಿಕಾರಿಗಳ ಕಛೇರಿ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕ ಟಿ.ಅಸ್ಗರ್ ಅವರು ಘಟನೆಯಲ್ಲಿ ಹತ್ಯೆರಾದ ಜನರ ಆತ್ಮಕ್ಕೆ ಶಾಂತಿಯನ್ನು ಕೂರುತ್ತೇವೆ ಹಾಗೂ ಗಾಯಗೊಂಡ ಜನರು ಅತಿ ಶೀಘ್ರದಲ್ಲಿ ಗುಣಮುಖ ಆಗಲು ಪ್ರಾರ್ಥಿಸುತ್ತೇವೆ ಎಂದು ಹೇಳಿದರು,
ಈ ಘಟನೆಯಿಂದ ದೇಶದ ನಾಗರಿಕರು ಆಕ್ರೋಶಗೊಂಡಿದ್ದಾರೆ ಅದರಿಂದ ಈ ಕೃತ್ಯ ಎಸಗಿದ ಎಲ್ಲ ಆರೋಪಿಗಳಿಗೆ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇದರ ಹಿಂದೆ ಇರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಆಗರಲಿ ಶತ್ರು ದೇಶದಲ್ಲಿ ಇದ್ರು ಹುಡಿಕಿ ತಂದು ಕಾನುನತ್ಮಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು,
ಮೋದಿ ಜಿ ಮತ್ತು ಅಮಿತ್ ಷಾ ರವರ ಜೋತೆ ರಾಜಕೀಯ ಸಿದ್ಧಾಂತದ ನಮ್ಮ ಭಿನ್ನಾಭಿಪ್ರಾಯ ಇರಬಹುದು ಆದರೆ ದೇಶದ ಭದ್ರತೆ ಮತ್ತು ಸುರಕ್ಷತೆ ವಿಷಯಗಳಲ್ಲಿ ನಾವು ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳ ಜೊತೆ ನಾವು ಇದ್ದೇವೆ ಎಂದರು.
ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಗಾಯಗೊಂಡ ಜನರಿಗೆ ಭೇಟಿಯಾಗಿ ಧೈರ್ಯ ತುಂಬಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿರುವ ಕಾರ್ಯಕ್ಕೆ ದಾವಣಗೆರೆ ಮುಸ್ಲಿಂ ಒಕ್ಕೂಟ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತದೆ ಎಂದರು.
ರಾಜಕೀಯದಲ್ಲಿ ವಿವಿಧ ರೀತಿಯ ವ್ಯತ್ಯಾಸ ಇದ್ರು ಕೂಡ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲಾರು ದೇಶದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಒಮ್ಮತಕ್ಕೆ ಬಂದಿರುವುದು ನೋಡಿದರೆ ಇದು ನಮ್ಮ ದೇಶದ ಸಂವಿಧಾನದ ಸೌಂದರ್ಯ ಎಂದು ತಿಳಿದು ಬರುತ್ತದೆ
ಈ ಭಯೋತ್ಪಾದಕ ಕೃತ್ಯ ತಡೆಗಟ್ಟಲು ಗುಪ್ತಚರ ಇಲಾಖೆ ವಿಫಲವಾಗಿದೆ ಹಾಗೂ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಲು ಸಂಭಂದಿಸಿದ ಅಧಿಕಾರಿಗಳು ವಿಫಲವಾಗಿದ್ದಾರೆ ಅದ್ದರಿಂದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಈ ಘಟನೆ ಯಲ್ಲಿ ಜೀವ ಕಳೆದುಕೊಂಡವರಿಗೆ ಸರ್ಕಾರ ದಿಂದ ಸೂಕ್ತ ಪರಿಹಾರ ನೀಡಬೇಕು. ಪಹಲ್ಗಾಮ್ ವಿಷಯ ಮುಂದಿಟ್ಟು ದೇಶದಲ್ಲಿ ಹಿಂದೂ-ಮುಸ್ಲಿಮರಲ್ಲಿ ವಿಷ ಬೀಜ ಬಿತ್ತು ಕೋಮು ಸಂಘರ್ಷ ನಡೆಸಲು ಕೆಲವರು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹೇಳಿಕೆಗಳು ನೀಡುತ್ತಿದ್ದಾರೆ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ
ಈ ಸಂದರ್ಭದಲ್ಲಿ ನಜೀರ್ ಅಹ್ಮದ್ ವಕೀಲರು. ಮಹಮ್ಮದ್ ಅಲಿ ಶೋಯೇಬ್. ಜೆ.ಅಮನುಲ್ಲಾ ಖಾನ್. ಅದಿಲ್ ಖಾನ್. ಮಸೂದ್ ಅಹ್ಮದ್. ಜಬೀವುಲ್ಲಾ. ಜಾಫರ್. ರಿಯಾಜ್. ಶಾಜೀಬ ಖಾನ್. ಮುಜಮಿಲ್. ರಹಮತವುಲ್ಲಾ. ಹಯಾತ್. ಲಿಯಾಕತ್ ಅಲಿ. ನವೀದ್. ರಫೀಕ್. ಅಜಮ್. ದಾದೇಶ. ಇತರರು ಉಪಸ್ಥಿತರಿದ್ದರು