
ದಾವಣಗೆರೆ, ಆಗಸ್ಟ್ 18 (ಇಂಡೋ ಟೈಮ್ಸ್/ ಕ.ವಾ): ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (SIR) ಅಂಗವಾಗಿ ಬಿಎಲ್ಒ (BLO) ಗಳಿಂದ ಮನೆ ಮನೆ ಭೇಟಿ, ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣ ಗೊಂಡಿದೆ.
.
ಜಿಲ್ಲೆಯಲ್ಲಿ ಜೂನ್ 16, 2026 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಅಷ್ಟೇ ಸಂಖ್ಯೆಯ ಎನ್ಯುಮರೇಷನ್ ನಮೂನೆಗಳನ್ನು ಬಿಎಲ್ಒಗಳಿಗೆ ವಿತರಿಸಲಾಗಿತ್ತು. ಜೂನ್ 30 ರಿಂದ ಆಗಸ್ಟ್ 17, 2026 ರ ಅವಧಿಯಲ್ಲಿ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಸಂಗ್ರಹಿಸಿದ ನಮೂನೆಗಳಲ್ಲಿ ಒಟ್ಟು 12,98,219 ನಮೂನೆಗಳನ್ನು ಗಣಕೀಕರಿಸಲಾಗಿದೆ. ಅಲ್ಲದೆ, ಆಗಸ್ಟ್ 18 ರವರೆಗೆ ನಮೂನೆಗಳ ಸಂಗ್ರಹಣೆ ಹಾಗೂ ಪರಿಶೀಲನೆ ವೇಳೆ ಒಟ್ಟು 2,01,063 ಮತದಾರರು ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಅಥವಾ ಇತರ ಕಾರಣಗಳಿಂದ ಗುರುತಿಸಲ್ಪಟ್ಟಿದ್ದಾರೆ. ಇದರಲ್ಲಿ 31,685 ಸಂಗ್ರಹ ವಾಗದ/ಗೈರು ,1,05,001 ಶಾಶ್ವತ ವಲಸೆ, 34,700 ಮರಣ, 28,333 ದ್ವಿಪ್ರತಿ ಹಾಗೂ 1,344 ಇತರೆ ಪ್ರಕರಣಗಳು ಸೇರಿವೆ.
ಕ್ಷೇತ್ರವಾರು ಸಮಗ್ರ ವಿವರ:
103-ಜಗಳೂರು: ಒಟ್ಟು 2,00,836 ಮತದಾರರಿದ್ದು, ವಿತರಿಸಿದ ಎಲ್ಲ 2,00,836 ನಮೂನೆಗಳಲ್ಲಿ 1,80,936 ಗಣಕೀಕೃತಗೊಂಡಿವೆ. ಪರಿಶೀಲನೆ ವೇಳೆ 19,900 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 1,062 ಸಂಗ್ರಹ ವಾಗದ /ಗೈರು, 11,639 ಶಾಶ್ವತ ವಲಸೆ, 3,739 ಮರಣ, 3,404 ದ್ವಿಪ್ರತಿ ಹಾಗೂ 56 ಇತರೆ ಪ್ರಕರಣಗಳಿವೆ.
105-ಹರಿಹರ: ಒಟ್ಟು 2,11,023 ಮತದಾರರಿದ್ದು, ವಿತರಿಸಿದ 2,11,023 ನಮೂನೆಗಳಲ್ಲಿ 1,90,022 ಗಣಕೀಕೃತಗೊಂಡಿವೆ. ಪರಿಶೀಲನೆಯಲ್ಲಿ 21,001 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 3,489 ಸಂಗ್ರಹ ವಾಗದ /ಗೈರು, 7,306 ವಲಸೆ, 4,786 ಮರಣ, 5,343 ದ್ವಿಪ್ರತಿ ಹಾಗೂ 77 ಇತರೆ ಪ್ರಕರಣಗಳಿವೆ.
106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, ವಿತರಿಸಿದ 2,58,718 ನಮೂನೆಗಳಲ್ಲಿ 1,99,136 ಗಣಕೀಕೃತಗೊಂಡಿವೆ. ಪರಿಶೀಲನೆಯಲ್ಲಿ 59,582 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 15,352 ಸಂಗ್ರಹ ವಾಗದ /ಗೈರು, 31,211 ವಲಸೆ, 7,560 ಮರಣ, 4,824 ದ್ವಿಪ್ರತಿ ಹಾಗೂ 635 ಇತರೆ ಪ್ರಕರಣಗಳಿವೆ.
107-ದಾವಣಗೆರೆ ದಕ್ಷಿಣ: ಒಟ್ಟು 2,27,996 ಮತದಾರರಿದ್ದು, ವಿತರಿಸಿದ 2,27,996 ನಮೂನೆಗಳಲ್ಲಿ 1,74,391 ಗಣಕೀಕೃತಗೊಂಡಿವೆ. ಪರಿಶೀಲನೆಯಲ್ಲಿ 53,605 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 9,978 ಸಂಗ್ರಹ ವಾಗದ /ಗೈರು, 29,186 ವಲಸೆ, 6,631 ಮರಣ, 7,371 ದ್ವಿಪ್ರತಿ ಹಾಗೂ 439 ಇತರೆ ಪ್ರಕರಣಗಳಿವೆ.
108-ಮಾಯಕಾಂಡ: ಒಟ್ಟು 1,97,048 ಮತದಾರರಿದ್ದು, ವಿತರಿಸಿದ 1,97,048 ನಮೂನೆಗಳಲ್ಲಿ 1,84,535 ಗಣಕೀಕೃತಗೊಂಡಿವೆ. ಪರಿಶೀಲನೆಯಲ್ಲಿ 12,513 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 260 ಸಂಗ್ರಹ ವಾಗದ /ಗೈರು, 6,014 ವಲಸೆ, 4,182 ಮರಣ, 2,019 ದ್ವಿಪ್ರತಿ ಹಾಗೂ 38 ಇತರೆ ಪ್ರಕರಣಗಳಿವೆ.
109-ಚನ್ನಗಿರಿ: ಒಟ್ಟು 2,03,628 ಮತದಾರರಿದ್ದು, ವಿತರಿಸಿದ 2,03,628 ನಮೂನೆಗಳಲ್ಲಿ 1,85,593 ಗಣಕೀಕೃತಗೊಂಡಿವೆ. ಪರಿಶೀಲನೆಯಲ್ಲಿ 18,035 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 627 ಸಂಗ್ರಹ ವಾಗದ /ಗೈರು, 10,219 ವಲಸೆ, 3,652 ಮರಣ, 3,497 ದ್ವಿಪ್ರತಿ ಹಾಗೂ 40 ಇತರೆ ಪ್ರಕರಣಗಳಿವೆ.
110-ಹೊನ್ನಾಳಿ: ಒಟ್ಟು 2,00,033 ಮತದಾರರಿದ್ದು, ವಿತರಿಸಿದ 2,00,033 ನಮೂನೆಗಳಲ್ಲಿ 1,83,606 ಗಣಕೀಕೃತಗೊಂಡಿವೆ. ಪರಿಶೀಲನೆಯಲ್ಲಿ 16,427 ನಮೂನೆಗಳನ್ನು ವರ್ಗೀಕರಿಸಲಾಗಿದ್ದು, ಇದರಲ್ಲಿ 917 ಸಂಗ್ರಹ ವಾಗದ /ಗೈರು, 9,426 ವಲಸೆ, 4,150 ಮರಣ, 1,875 ದ್ವಿಪ್ರತಿ ಹಾಗೂ 59 ಇತರೆ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.