ದಾವಣಗೆರೆ, ಅಕ್ಟೋಬರ್ 07 (ಇಂಡೋ ಟೈಮ್ಸ್ ಮೀಡಿಯಾ): ಜಿಲ್ಲೆಯ ಪ್ರತಿ ಪಶುವೈದ್ಯಕೀಯ ಸಂಸ್ಥೆಯಲ್ಲಿ ಉಚಿತ ಮೇವಿನ ಬೀಜದ ಕಿರುಪೊಟ್ಟಣಗಳು ಲಭ್ಯವಿದ್ದು, ಜಾನುವಾರುಗಳನ್ನು ಹೊಂದಿರುವ ಅರ್ಹ ರೈತರು ನಿಗದಿತ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನೆ ಮತ್ತು...