
ದಾವಣಗೆರೆ (ಇಂಡೋ ಟೈಮ್ಸ್ ಮೀಡಿಯಾ)
ಮಾ.25: ಜಿಲ್ಲೆಯಲ್ಲಿ ನೊಂದಣಿಯಾಗಿರುವ ಸಂಘ, ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ಲೆಕ್ಕಪತ್ರಗಳನ್ನು ದಾಖಲಿಸದೆ, ನವೀಕರಣಗೊಳ್ಳದೆ ಇದ್ದಲ್ಲಿ ಅಂತಹ ಸಂಘ-ಸಂಸ್ಥೆಗಳನ್ನು ಸದಸ್ಯರ ಹಾಗೂ ಸಂಘಗಳ ಹಿತದೃಷ್ಟಿಯಿಂದ ಪ್ರತಿ ವರ್ಷಕ್ಕೆ ರೂ.3000/ ನಂತೆ ದಂಡ ಪಾವತಿಸಿ ಅಗತ್ಯ ದಾಖಲೆಗಳೊಂದಿಗೆ ಬರುವ ಡಿಸೆಂಬರ್ 31 ರೊಳಗೆ ಸಲ್ಲಿಸಿ ನವೀಕರಣ ಅಥವಾ ಲೆಕ್ಕಪತ್ರಗಳನ್ನು ದಾಖಲಿಸಿಕೊಳ್ಳಲು ತಿಳಿಸಿದೆ.
ಇಲ್ಲವಾದಲ್ಲಿ ಸಂಘ, ಸಂಸ್ಥೆಗಳನ್ನು ರದ್ದುಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಸಂಘಗಳ ನೊಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಟಿ.ಮಧುಶ್ರಿನಿವಾಸ ತಿಳಿಸಿದ್ದಾರೆ.