
ಶ್ರೀನಿವಾಸಪುರ : (ಶಬ್ಬೀರ್ ಅಹ್ಮದ್) ಪಟ್ಟಣದ ಪುರಸಭೆ ಕಚೇರಿಯಲ್ಲಿ ಭಾನುವಾರ ಲೀಡ್ ಬ್ಯಾಂಕ್ಗಳ ವತಿಯಿಂದ ನಡೆದ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಡಿಮೆ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ವಿಶೇಷವಾಗಿ ಮಹಿಳೆಯರು ಮುಖ್ಯ ಕಾರಣರಾಗುತ್ತಾರೆ .
ಮಹಿಳೆಯರು ಬ್ಯಾಂಕ್ಗಳಲ್ಲಿ ಖಾತೆ ತೆರದು , ಬರುವ ಸಂಪಾದನೆಯ ಸ್ವಲ್ಪ ಹಣವನ್ನು ಬ್ಯಾಂಕಿನಲ್ಲಿ ಉಳಿತಾಯ ಮಾಡಿದಾಗ ತಮ್ಮ ಕಷ್ಟ ಕಾಲಕ್ಕೆ ಆ ಹಣವು ಸಹಾಯಮಾಡುತ್ತದೆ.
ಆರ್ಥಿಕ ಸಾಕ್ಷರತಾ ತಾಲೂಕು ಸಂಯೋಜಕ ಜಿ.ವೆಂಕಟೇಶ್ ಮಾತನಾಡಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ ೧೮ ರಿಂದ ೭೦ ವರ್ಷ ವಯಸ್ಸುಳ್ಳವರು ವಾರ್ಷಿಕ ೨೦ರೂ ಅಪಘಾತ ವಿಮೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ೧೮ ರಿಂದ ೫೦ ವರ್ಷ ವಯಸ್ಸುಳ್ಳವರು ವಾರ್ಷಿಕ ೪೩೬ ರೂ ಕಟ್ಟಬೇಕು. ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಪುರಸೆಭೆ ವ್ಯವಸ್ಥಾಪಕ ನವೀನ್ಚಂದ್ರ, ಟಿಎಚ್ಒ ಮಹ್ಮದ್ ಶರೀಫ್, ಕೆನರಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ನವೀನ್ಚಂದ್ರಸಾಹು, ಆರ್ಥಿಕ ಸಾಕ್ಷರತಾ ಸಲಹೆಗಾರ ಪಿ.ರಾಮಚಂದ್ರ, ಆರ್ಥಿಕ ಸಾಕ್ಷರತಾ ಸಂಯೋಜಕ ನರಸಿಂಹಮೂರ್ತಿ, ಪುರಸಭೆ ಸಿಬ್ಬಂದಿಗಳಾದ ಸುಪ್ರಿಯ, ಮೀನಾ ಹಾಗು ಎಲ್ಲಾ ಬ್ಯಾಂಕ್ಗಳ ವ್ಯವಸ್ಥಾಪಕರು, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘ ದ ಪ್ರತಿನಿಧಿಗಳು ಹಾಜರಿದ್ದರು.