
ದಾವಣಗೆರೆ: ಪುಲ್ ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಧೂಡಾ ಛೇರ್ಮನ್ ದಿನೇಶ್ ಕೆ ಶೆಟ್ಟಿ ಇವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಏರ್ಪಡಿಸಲಾಗಿದೆ. ಫೆ.27ರ ಗುರುವಾರ ರಂದು ಸಂಜೆ 5 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಬ್ಯಾಸ್ಕೆಟ್ಬಾಲ್ ಗ್ರೌಂಡ್ ನಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಜಿಲ್ಲಾ ಪೊಲೀಸರು ಐ.ಎಸ್.ಐ ಮಾರ್ಕ್ ಇರುವ ಫುಲ್ ಹೆಲ್ಮೆಟ್ ಹಾಕುವುದು ಕಡ್ಡಾಯ ಮಾಡಿರುವ ಕುರಿತು ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಮಾಜ ಸೇವಕರು, ಭಾಗವಹಿಸಬೇಕೆಂದು ದಿನೇಶ್ ಕೆ ಶೆಟ್ಟಿ ತಿಳಿಸಿದ್ದಾರೆ.
ಈಚೆಗೆ ದಾವಣಗೆರೆಯಲ್ಲಿ 5 ಸಾವಿರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ,
ಬೇಸಿಗೆಯಲ್ಲಿ ಹೆಲ್ಮೆಟ್ ಕಡ್ಡಾಯದಿಂದ ವಾಹನ ಚಾಲಕರಿಗೆ ಬಹಳ ತೊಂದರೆ ಆಗುತ್ತಿರುವುದರಿಂದ ಮಳೆಗಾಲದ ತನಕ ಹೆಲ್ಮೆಟ್ ಕಡ್ಡಾಯ ಮುಂದೂಡಬೇಕೆಂದು ಸಭೆಯ ನಂತರ ಪೊಲೀಸ್ ಇಲಾಖೆಗೆ ಮನವಿ ಪತ್ರ ಕೊಡಲಾಗುವುದು ಎಂದು ತಿಳಿಸಿದ್ದಾರೆ.